ಊಟವಾದ ತಕ್ಷಣ ನೀರು ಕುಡಿಯಬಾರದು ಏಕೆ ಗೊತ್ತಾ...? ಸಂಪೂರ್ಣ ಮಾಹಿತಿ ಓದಿ



ದಿನವಿಡೀ ನೀರು ಕುಡಿಯುತ್ತಿರುವುದು ಬಹಳ ಒಳ್ಳೆಯದು ಎಂಬುದನ್ನು ನಾವು ಹಲವು ಬಾರಿ ಓದಿ ಕೇಳಿ ತಿಳಿದುಕೊಂಡಿದ್ದೇವೆ. ಅದರಲ್ಲೂ ಬೆಚ್ಚಗಿನ ನೀರು ಕುಡಿಯುವುದರಿಂದ ಹಲವು ಲಾಭಗಳಿವೆ ಎಂಬುದನ್ನೂ ತಿಳಿದಿದ್ದೇವೆ. ಆದರೆ ಊಟಕ್ಕೆ ಮುನ್ನ ಹಾಗೂ ಊಟವಾದ ಬಳಿಕ ಬಿಸಿನೀರು ಕುಡಿಯುವುದು ಒಳ್ಳೆಯದಲ್ಲ ಎಂಬುದನ್ನು ಹಲವು ಸಂಶೋಧನೆಗಳು ದೃಢಪಡಿಸಿವೆ.

ಊಟಕ್ಕೆ ಮುನ್ನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗುವ ದ್ರವವನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಗೆ ತೊಂದರೆಯುಂಟು ಮಾಡುತ್ತದೆ ಎನ್ನಲಾಗಿದೆ.

ಊಟದ ಬಳಿಕ ನೀರು ಕುಡಿಯುವುದರಿಂದಲೂ ಜೀರ್ಣಕ್ರಿಯೆ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ನೀರನ್ನು ಊಟವಾದ ತಕ್ಷಣ ಕುಡಿಯುವುದರಿಂದ ದೇಹದಲ್ಲಿ ಬೊಜ್ಜು ಬೆಳೆಯುತ್ತದೆ. ಕನಿಷ್ಠ ಒಂದು ಗಂಟೆ ಬಳಿಕ ನೀರು ಕುಡಿಯಬೇಕು ಎನ್ನಲಾಗಿದೆ.

ಊಟದ ವೇಳೆ ನೀರು ಕುಡಿಯುವುದರಿಂದ ಆಹಾರ ಮೆತ್ತಗಾಗುತ್ತದೆ ಮಾತ್ರವಲ್ಲ ಬಹುಬೇಗ ಕರಗುತ್ತದೆ. ಹೆಚ್ಚು ಮಸಾಲೆ ಇರುವ ವಸ್ತುಗಳನ್ನು ಸೇವಿಸುವಾಗ ನೀರು ಕುಡಿಯುವುದು ಬಹಳ ಒಳ್ಳೆಯದು ಎನ್ನಲಾಗಿದೆ.

 ಗೃಹಿಣಿಯರಿಗೆ ಗುಡ್ ನ್ಯೂಸ್ ; ಕೇವಲ ₹820 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಲಭ್ಯ

ಆಗಸದಲ್ಲೇ ಯುದ್ಧ ವಿಮಾನಗಳ ಡಿಕ್ಕಿ: ಪೈಲಟ್‌ಗಳ ಮರಣ

ಕೊಲಂಬಿಯ ವಾಯುಪಡೆಯ 2 ಯುದ್ಧವಿಮಾನಗಳು ಹಾರಾಟದ ಸಂದರ್ಭದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದಿದ್ದು, ಆಕಾಶದಲ್ಲೇ ಹೊತ್ತಿ ಉರಿದು ಪತನಗೊಂಡಿವೆ. ಈ ದುರ್ಘ‌ಟನೆಯಲ್ಲಿ ಇಬ್ಬರು ಪೈಲಟ್‌ಗಳು ಮೃತಪಟ್ಟಿರುವುದು ವರದಿಯಾಗಿದೆ.

ಅಪಿಯಾಯ್‌ ವಾಯುನೆಲೆಯಲ್ಲಿ ನಡೆಯುತ್ತಿದ್ದ ತರಬೇತಿಯಲ್ಲಿ ಯುದ್ಧವಿಮಾನಗಳು ಭಾಗವಹಿಸಿದ್ದವು. ವೃತ್ತಾಕಾರದಲ್ಲಿ ಯುದ್ಧವಿಮಾನಗಳು ಹಾರಾಟ ನಡೆಸುತ್ತಿದ್ದವು. ಈ ವೇಳೆ ಟುಕಾನೋ ಟಿ-27ನ ಎರಡು ಯುದ್ಧ ವಿಮಾನಗಳು ಒಂದಕ್ಕೊಂದು ಡಿಕ್ಕಿಯಾಗಿವೆ. ಬಳಿಕ ಕೆಲವೇ ಸೆಕೆಂಡುಗಳಲ್ಲೇ ಆಕಾಶದಲ್ಲಿ ಹೊತ್ತಿ ಉರಿದಿವೆ. ಪರಿಣಾಮ ಎರಡೂ ಯುದ್ಧವಿಮಾನಗಳ ಪೈಲಟ್‌ಗಳು ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಕೊಲಂಬಿಯ ವಾಯುಪಡೆ ವಿಷಾದ ವ್ಯಕ್ತಪಡಿಸಿ, ಪೈಲಟ್‌ಗಳ ಸಾವಿಗೆ ಸಂತಾಪ ಸೂಚಿಸಿದೆ. ವಿಮಾನ ಪತನದ ದೃಶ್ಯಾವಳಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜಾಲತಾಣದಲ್ಲಿ ವಿಡಿಯೊ ವೈರಲ್‌ ಆಗಿದೆ.

Post a Comment

0 Comments
* Please Don't Spam Here. All the Comments are Reviewed by Admin.