ಪಡಿತದಾರರಿಗೆ ಸಿಹಿ ಸುದ್ದಿ: ನಿಮ್ಮ ಖಾತೆಗೆ ಹಣ ಬರಲು ಈ ಕೂಡಲೇ ಈ ಕೆಲಸ ಮಾಡಿ


ಪಡಿತರ ಚೀಟಿಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮೊದಲು ಜೂನ್ 30ರವರೆಗೆ ಇತ್ತು. ಆದ್ರೆ, ಕೇಂದ್ರ ಸರ್ಕಾರ ಸೆಪ್ಟೆಂಬರ್ 30ರವರೆಗೆ ಗಡುವು ವಿಸ್ತರಿಸಿದೆ. ಅಂತ್ಯೋದಯ ಯೋಜನೆ, ಆದ್ಯತೆಯ ವಸತಿ ಯೋಜನೆಗಳ ಪ್ರಯೋಜನಗಳನ್ನ ಪಡೆಯಲುಪಡಿತರ ಚೀಟಿಆಕಾಂಕ್ಷಿಗಳು ತಮ್ಮ ಆಧಾರ್ ಸಂಖ್ಯೆಯನ್ನ ಲಿಂಕ್ ಮಾಡಬೇಕು.


ಆದ್ದರಿಂದಲೇ ಪಡಿತರ ಚೀಟಿದಾರರಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಸರ್ಕಾರ ಪದೇ ಪದೇ ಹೇಳುತ್ತಿದೆ. ಪಡಿತರ ಚೀಟಿಯನ್ನ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವವರು ಉಚಿತ ಪಡಿತರವನ್ನ ಪಡೆಯಬಹುದು. ಪ್ರತಿ ತಿಂಗಳು ಸರಕಾರದಿಂದ ಉಚಿತ ಪಡಿತರ ಸಾಮಗ್ರಿಗಳನ್ನ ಪಡೆಯಬಹುದು.


ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಉಚಿತ. ಈ ಸೇವೆಯು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಒಬ್ಬರ ಹೆಸರಲ್ಲಿ ಎರಡ್ಮೂರು ಪಡಿತರ ಚೀಟಿ ಪಡೆದವರೂ ಇದ್ದಾರೆ. ಇಂತಹ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಇದಲ್ಲದೆ, ಅನರ್ಹ ವ್ಯಕ್ತಿಗಳಿಗೆ ಪಡಿತರ ಚೀಟಿಗಳನ್ನ ತೆಗೆದುಹಾಕಬಹುದು.

ನಿಮ್ಮ ನಂಬರ್​ಗೆ ರಿಚಾರ್ಜ್ ಮಾಡದಿದ್ರೆ ಎಷ್ಟು ದಿನಗಳಲ್ಲಿ ಆ ನಂಬರ್ ಬೇರೆಯವರಿಗೆ ನೀಡಲಾಗುತ್ತದೆ...?

ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಹತ್ತಿರದ ಸರ್ಕಾರಿ ಕಚೇರಿಗೆ ಹೋಗಿ ಅಥವಾ ಆನ್‌ಲೈನ್‌ನಲ್ಲಿ ಪಡಿತರ ಚೀಟಿಗೆ ಆಧಾರ್ ಕಾರ್ಡ್'ನ್ನ ಲಿಂಕ್ ಮಾಡಲು ಈ ಕೆಳಗಿನ ಹಂತಗಳನ್ನ ಅನುಸರಿಸಿ.


  1. ನಿಮ್ಮ ರಾಜ್ಯದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪೋರ್ಟಲ್ ತೆರೆಯಿರಿ.
  2. ಪಡಿತರ ಚೀಟಿ, ಆಧಾರ್ ಕಾರ್ಡ್ ಲಿಂಕ್ ಮಾಡುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ಅದರ ನಂತರ ನಿಮ್ಮ ಪಡಿತರ ಚೀಟಿ ಸಂಖ್ಯೆ, ಆಧಾರ್ ಸಂಖ್ಯೆ,ಮೊಬೈಲ್ ಸಂಖ್ಯೆಯನ್ನ ನಮೂದಿಸಿ.
  4. ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಿದ OTP ನಮೂದಿಸಿ.
  5. OTP ನಮೂದಿಸಿದ ನಂತರ ನಿಮ್ಮ ಪಡಿತರ ಚೀಟಿಗೆ ಆಧಾರ್ ಕಾರ್ಡ್'ನ್ನ ಲಿಂಕ್ ಮಾಡಲಾಗುತ್ತದೆ.


ಸಬ್ಸಿಡಿ ದರದಲ್ಲಿ ಜನರಿಗೆ ಆಹಾರವನ್ನ ಒದಗಿಸಲು ಸರ್ಕಾರವು ಪಡಿತರ ಚೀಟಿಗಳನ್ನ ನೀಡುತ್ತದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ, ಜನರು ಸರ್ಕಾರದಿಂದ ಪಡಿತರ ಸರಕುಗಳನ್ನ ಸಬ್ಸಿಡಿ ದರದಲ್ಲಿ ಅಥವಾ ಉಚಿತವಾಗಿ ಪಡೆಯಬಹುದು. ಪಡಿತರ ಚೀಟಿಗಳನ್ನ ಗುರುತಿನ ಪುರಾವೆಯಾಗಿ ಸಲ್ಲಿಸಬಹುದು.

Link ಮಾಡಲು ಕ್ಲಿಕ್ ಮಾಡಿ: https://ahara.kar.nic.in/Home/EServices

Post a Comment (0)
Previous Post Next Post

Responsive Ads

Responsive Ads