ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಭಾರೀ ಮಳೆ ಹಿನ್ನೆಲೆ ಶಾಲೆಗಳಿಗೆ ರಜೆ ನೀಡಲಾಗಿದೆ. ಈ ಹಿಂದೆಯೂ ಕರ್ನಾಟಕದ ಕೆಲವು ಶಾಲೆಗಳಿಗೆ ಮಳೆ ನಿಮಿತ್ತ ರಜೆ ನೀಡಲಾಗಿತ್ತು.
ಕರ್ನಾಟಕದಲ್ಲಿ ಮಾತ್ರವಲ್ಲ. ಕೇರಳ ಹಾಗೂ ಗೋವಾ ರಾಜ್ಯದಲ್ಲೂ ವಿದ್ಯಾರ್ಥಿಗಳಿಗೆ ಮಳೆಯ ಕಾರಣದಿಂದಾಗಿ ರಜೆ ನೀಡಲಾಗಿದೆ.
ನಾಳೆ ಚಿಕ್ಕಮಗಳೂರು ತಾಲೂಕಿನ ಆಯ್ದ ಭಾಗದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಕುರಿತು ಅಧಿಕೃತ ಮಾಹಿತಿಯೂ ಹೊರಬಿದ್ದಿದೆ.
ಮಳೆಯಲ್ಲಿ ಮಕ್ಕಳು ಶಾಲೆಗೆ ಹೋಗಲು ಕಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ಮಕ್ಕಳ ಸುರಕ್ಷತೆ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ರಜೆ ನೀಡಲಾಗಿದೆ.
ಕಟ್ಟಡಗಳು ಹಳೆಯದಾಗಿದ್ದು ದುರಸ್ಥಿ ಅಗತ್ಯವಿದೆ ಎಂಬ ಕಾರಣವೂ ಮುಖ್ಯವಾಗಿದೆ. ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗೃತ ಕ್ರಮವಾಗಿ ರಜೆ ನೀಡಲಾಗಿದೆ.
ಜಾಗರ, ವಸ್ತಾರೆ, ಖಾಂಡ್ಯ, ಆಲ್ದೂರು, ಆವತಿ ಹೋಬಳಿ ಶಾಲೆಗಳಿಗೆ ರಜೆ ನೀಡಲಾಗುವುದು ಎಂದು ಅಧಿಕೃತವಾಗಿ ಹೇಳಿದ್ದಾರೆ.
ರಜೆ ಆದೇಶ ಹೊರಡಿಸಿದ ಚಿಕ್ಕಮಗಳೂರು ಬಿಇಓ ಎಲ್ಲಾ ಶಾಲೆಗಳಿಗೂ ಈ ಸೂಚನೆ ನೀಡಿದ್ದಾರೆ. ಇನ್ನು ಎಷ್ಟು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂಬುದು ತಿಳಿಯದಂತಾಗಿದೆ.