ಸ್ವಾತಂತ್ತ್ಯೋತ್ಸವದ ಸಂಭ್ರಮದಲ್ಲಿ ಭಾಗಿಯಾಗಲು ಹೊರಟಿದ್ದ ಶಿಕ್ಷಕ ರಸ್ತೆ ಅಪಘಾತದಲ್ಲಿ ಸಾವು



ಕುಮಟ:

ಧ್ವಜಾರೋಹಣಕ್ಕೆಂದು ಬೈಕ್ ಮೇಲೆ ಶಾಲೆಗೆ ಹೋಗುತ್ತಿದ್ದ ಶಿಕ್ಷಕರೊಬ್ಬರಿಗೆ ಬೋಲೆರೋ ವಾಹನ ಡಿಕ್ಕಿ ಹೊಡೆದು ಶಿಕ್ಷಕ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಕಾರ ಕ್ರಾಸ್ ಸಮೀಪ‌ ನಡೆದಿದೆ.


ಅಪಘಾತದಲ್ಲಿ ಹೆಗಡೆ ಗ್ರಾಮದ ಮೇಲಿನಕೇರಿ ನಿವಾಸಿಯಾಗಿದ್ದ ಗೋಪಾಲ ಪಟಗಾರ (50) ಎಂಬುವವರೆ ಮೃತಪಟ್ಟಿರುವ ಶಿಕ್ಷಕರಾಗಿದ್ದಾರೆ. ಇವರು ಗುಡೆಅಂಗಡಿ ಶಾಲೆ ಶಿಕ್ಷಕರಾಗಿದ್ದು, ಧ್ವಜಾರೋಹಣಕ್ಕಾಗಿ ಬೆಳಿಗ್ಗೆ ಹೆಗಡೆಯ ಮೇಲಿನ ಕೇರಿಯಲ್ಲಿರುವ ತಮ್ಮ ಮನೆಯಿಂದ ಬೈಕ್ ಮೇಲೆ‌ ಶಾಲೆಗೆ ಹೋಗುತ್ತಿದ್ದಾಗ ಎದುರಿನಿಂದ ಅತೀವವಾಗಿ ಬಂದ ಬೋಲೆರೋ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದ್ದು,‌ಇದರಿಂದಾಗಿ ಶಿಕ್ಷಕ ಗೋಪಾಲ ಪಟಗಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ.


ಘಟನಾ ಸ್ಥಳಕ್ಕೆ ಕುಮಟ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನೀವು ಕೂಡ ಇವರ ಆತ್ಮಕ್ಕೆ ಶಾಂತಿ ಕೋರಿ ಹಾಗೂ ಇತರರಿಗೂ ಶೇರ್ ಮಾಡಿ 

Post a Comment

0 Comments
* Please Don't Spam Here. All the Comments are Reviewed by Admin.