ನೀವು ನಿಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಬಯಸಿದರೆ ಹಲವಾರು ಹೂಡಿಕೆ ಆಯ್ಕೆಗಳು ಲಭ್ಯವಿದೆ. ಅವುಗಳಲ್ಲಿ ಒಂದು ಮ್ಯೂಚುವಲ್ ಫಂಡ್. ಈ ಆಯ್ಕೆಯಡಿಯಲ್ಲಿ ನಾವು ಸ್ಟಾಕ್‌ಗಳು ಮತ್ತು ಬಾಂಡ್‌ಗಳಂತಹ ವಿವಿಧ ಸೆಕ್ಯುರಿಟಿಗಳಲ್ಲಿ ಇರಿಸಲು ಹಣವನ್ನು ಹೂಡಿಕೆ ಮಾಡಬಹುದಾಗಿದೆ.
ಈ ಹೂಡಿಕೆಗಳು ವ್ಯವಸ್ಥಿತ ಹೂಡಿಕೆ ಯೋಜನೆಯನ್ನು (systematic investment plan/ ಎಸ್‌ಐಪಿ) ಆಧರಿಸಿವೆ.
ಇದರಲ್ಲಿ ಮಾಡುವ ಹೂಡಿಕೆಯು ದೀರ್ಘಾವಧಿಯಲ್ಲಿ ಲಾಭದಾಯಕವಾಗಿರುತ್ತದೆ. ಮತ್ತೊಂದು ಪ್ರಯೋಜನಕಾರಿ ಆಯ್ಕೆಯು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಯೋಜನೆಯಾಗಿದೆ. ಈ ಎರಡು ಹೂಡಿಕೆ ಆಯ್ಕೆಗಳು ಹೇಗೆ ಹೋಲುತ್ತದೆ ಮತ್ತು ಯಾವುದು ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂಬುದನ್ನು ನೋಡೋಣ ಮುಂದೆ ಓದಿ...
ಎಲ್‌ಐಸಿ ಯೋಜನೆ:
ಎಲ್‌ಐಸಿ ಜೀವ, ಆರೋಗ್ಯ ಮೊದಲಾದ ವಿಮೆಗಳನ್ನು ಪೂರೈಸುವ ಸರ್ಕಾರಿ ಬೆಂಬಲಿತ ಘಟಕವಾಗಿದೆ. ಎಲ್‌ಐಸಿಯ ಜೀವ ವಿಮಾ ಯೋಜನೆಯು ಜೀವ ಅಪಾಯದಿಂದ ರಕ್ಷಣೆ ಮತ್ತು ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಪಾಲಿಸಿ ಅವಧಿಯ ವೇಳೆಯೇ ಪಾಲಿಸಿದಾರರು ಸಾವನ್ನಪ್ಪಿದರೆ, ನಾಮಿನಿಗೆ ಡೆತ್ ಬೆನಿಫಿಟ್ ಲಭ್ಯವಾಗುತ್ತದೆ.
ಮ್ಯೂಚುಯಲ್ ಫಂಡ್:
ಮ್ಯೂಚುಯಲ್ ಫಂಡ್ ಇನ್ನೊಂದು ಜನಪ್ರಿಯ ಹೂಡಿಕೆ ಆಯ್ಕೆಯಾಗಿದೆ. ಅವುಗಳನ್ನು ಎರಡು ವಿಶಾಲ ವರ್ಗಗಳಾಗಿ ವಿಂಗಡಿಸಲಾಗಿದೆ, ಡೆಬ್ಟ್ ಮತ್ತು ಇಕ್ವಿಟಿ ಮ್ಯೂಚುಯಲ್ ಫಂಡ್‌ಗಳು ಎಂಬ ಎರಡು ಆಯ್ಕೆಗಳಿದೆ. ಡೆಬ್ಟ್ ಮ್ಯೂಚುವಲ್ ಫಂಡ್‌ಗಳು ಸರ್ಕಾರಿ ಭದ್ರತೆಗಳು, ಮನಿ ಮಾರ್ಕೆಟ್ ಇನ್‌ಸ್ಟ್ರುಮೆಂಟ್ ಮತ್ತು ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಆಗಿದೆ. ಮತ್ತೊಂದೆಡೆ, ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹಣವನ್ನು ಈಕ್ವಿಟಿಯಲ್ಲಿ ಹೂಡಿಕೆ ಮಾಡಲಾಗುತ್ತಿದೆ. 500 ರೂಪಾಯಿವರೆಗೆ ಕಡಿಮೆ ಮೊತ್ತದ ಮ್ಯೂಚುವಲ್ ಫಂಡ್‌ಗಳಲ್ಲಿ ನೀವು ಹೂಡಿಕೆ ಮಾಡಬಹುದು.
ನಿರುದ್ಯೋಗಿ ಡಿಪ್ಲೋಮಾ, ಪದವೀಧರರಿಗೆ ಗುಡ್ ನ್ಯೂಸ್ : 'ಯುವನಿಧಿ' ಜಾರಿ ಬಗ್ಗೆ ಸಿಎಂ ಸ್ಪಷ್ಟನೆ
ಎಲ್‌ಐಸಿ vs ಮ್ಯೂಚುಯಲ್ ಫಂಡ್‌ಗಳು: ಪ್ರಮುಖ ವ್ಯತ್ಯಾಸಗಳು
ಅಪಾಯ: ಎಲ್‌ಐಸಿ ಪಾಲಿಸಿಗಳು ಕೇಂದ್ರ ಸರ್ಕಾರ ಬೆಂಬಲಿತವಾಗಿದೆ. ಹಾಗೆಯೇ ಕಡಿಮೆ ಅಪಾಯಕಾರಿಯಾಗಿದೆ. ನೀವು ಇದರಲ್ಲಿ ಡೆತ್ ಬೆನಿಫಿಟ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ಮ್ಯೂಚುವಲ್ ಫಂಡ್‌ಗಳು ಮಾರುಕಟ್ಟೆಯ ಮೇಲೆ ಅವಲಂಬಿತವಾಗಿವೆ. ಆದಾಯದ ವಿಚಾರಕ್ಕೆ ಬಂದಾಗ ಇದು ಅಸ್ಥಿರವಾಗಿರುತ್ತದೆ, ಸ್ಥಿರವಾದ ಆದಾಯ ಲಭ್ಯವಾಗದು.
ರಿಟರ್ನ್ಸ್: ದೀರ್ಘಾವಧಿಯಲ್ಲಿ ಎಲ್‌ಐಸಿಗಿಂತ ಮ್ಯೂಚುವಲ್ ಫಂಡ್‌ಗಳು ಹೆಚ್ಚಿನ ಆದಾಯವನ್ನು ನೀಡುತ್ತವೆ. ನಿಧಿಯ ಮೌಲ್ಯದಲ್ಲಿ ಯಾವುದೇ ಅಲ್ಪಾವಧಿಯ ಏರಿಳಿತಗಳನ್ನು ಪರಿಹರಿಸಲು ಈ ಆದಾಯಗಳು ಸಹಾಯ ಮಾಡುತ್ತವೆ.
ಉದ್ದೇಶ: ಎಲ್‌ಐಸಿ ಯೋಜನೆಗಳು ಹೂಡಿಕೆದಾರರಿಗೆ ತಮ್ಮ ಅವಲಂಬಿತರ ಆರ್ಥಿಕ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಅವಕಾಶವನ್ನು ನೀಡುತ್ತವೆ. ಆದರೆ ನಾವು ಮ್ಯೂಚುವಲ್ ಫಂಡ್‌ಗಳಿಗೆ ಸಂಬಂಧಿಸಿದಂತೆ, ಪಾಲಿಸಿಯಲ್ಲಿ ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿ ಮಾಡಿಕೊಳ್ಳಬಹುದು.
ತೆರಿಗೆ ಪ್ರಯೋಜನಗಳು: ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ, ಜೀವ ವಿಮೆಯಲ್ಲಿ 1.5 ಲಕ್ಷ ರೂಪಾಯಿವರೆಗೆ ಪ್ರೀಮಿಯಂ ಪಾವತಿಯಲ್ಲಿ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ಮ್ಯೂಚುಯಲ್ ಫಂಡ್‌ಗಳಲ್ಲಿ ಈಕ್ವಿಟಿ-ಲಿಂಕ್ಡ್ ಉಳಿತಾಯ ಯೋಜನೆಗಳು (ಇಎಲ್‌ಎಸ್‌ಎಸ್) ಮಾತ್ರ 80C ಕಡಿತಕ್ಕೆ ಅರ್ಹತೆ ಪಡೆಯುತ್ತವೆ.
ಎಲ್‌ಐಸಿ vs ಮ್ಯೂಚುಯಲ್ ಫಂಡ್‌ಗಳು: ಯಾವುದು ಉತ್ತಮ?
ಎಲ್‌ಐಸಿ ಪಾಲಿಸಿ ಮತ್ತು ಮ್ಯೂಚುಯಲ್ ಫಂಡ್ ನಡುವಿನ ಹೂಡಿಕೆಯು ವ್ಯಕ್ತಿಯ ಹೂಡಿಕೆಯ ಅಗತ್ಯದ ಮೇಲೆ ಅವಲಂಬಿತವಾಗಿರುತ್ತದೆ. ಹೂಡಿಕೆದಾರರು ದೀರ್ಘಾವಧಿಯಲ್ಲಿ ಸಂಪತ್ತನ್ನು ಸೃಷ್ಟಿಸುವಲ್ಲಿ ಹೆಚ್ಚು ಗಮನಹರಿಸಿದರೆ, ಮ್ಯೂಚುವಲ್ ಫಂಡ್‌ಗಳು ಉತ್ತಮ ಆಯ್ಕೆಯಾಗಿದೆ.
ಇನ್ನು ಹೂಡಿಕೆಯ ಉದ್ದೇಶವು ಒಬ್ಬರ ಕುಟುಂಬದ ಭವಿಷ್ಯವನ್ನು ಸುರಕ್ಷಿತಗೊಳಿಸುವುದಾದರೆ, ಜೀವ ವಿಮೆಯು ಹೆಚ್ಚು ಪ್ರಯೋಜನಕಾರಿ ಆಯ್ಕೆಯಾಗಿದೆ. ಯಾವುದೇ ಹೂಡಿಕೆದಾರರು ತಮ್ಮ ಮೊತ್ತವನ್ನು ಬೇರೆ ಎಲ್‌ಐಸಿ ಪಾಲಿಸಿಗಳಲ್ಲಿ ಹೂಡಿಕೆ ಮಾಡಬಹುದು. ಭವಿಷ್ಯಕ್ಕಾಗಿ ಹಣ ಉಳಿತಾಯ ಜೊತೆಗೆ ವಿಮೆಯು ಲಭ್ಯವಾಗುತ್ತದೆ.