ನಾಡು ಮಾಹಿತಿ:-
ಸರ್ಕಾರಿ ನೌಕರರಿಗಾಗಿ ಕೇಂದ್ರ ಸರ್ಕಾರವು ಹಲವಾರು ಸವಲತ್ತುಗಳನ್ನು ಒದಗಿಸಿದೆ. ಇದೀಗ ರಕ್ಷಣಾ ಸಚಿವಾಲಯದಲ್ಲಿರುವ ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ಅಪ್ಡೇಟ್ ದೊರಕಿದೆ. ಕೇಂದ್ರ ರಕ್ಷಣಾ ನೌಕರರ ಬಡ್ತಿಗೆ ಅಗತ್ಯವಿರುವ ಕನಿಷ್ಠ ಅರ್ಹತಾ ಸೇವೆಯ ಮಾನದಂಡಗಳನ್ನು ಸಚಿವಾಲಯವು ಪರಿಷ್ಕರಿಸಿದೆ.
7ನೇ ವೇತನ ಆಯೋಗದ ವೇತನ ಮಟ್ಟವನ್ನು ಅನುಸರಿಸುವ ಮತ್ತು ಕೇಂದ್ರ ರಕ್ಷಣಾ ಸೇವೆಯ ಅಂದಾಜಿನಿಂದ ವೇತನವನ್ನು ಪಾವತಿಸುವ ಕೇಂದ್ರ ರಕ್ಷಣಾ ನಾಗರಿಕ ಉದ್ಯೋಗಿಗಳಿಗೆ ಪರೀಷ್ಕೃತ ಮಾನದಂಡಗಳು ಅನ್ವಯವಾಗುತ್ತವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ರಕ್ಷಣಾ ನಾಗರಿಕ ಉದ್ಯೋಗಿಗಳ ಬಡ್ತಿಗೆ ಅಗತ್ಯವಿರುವ ಕನಿಷ್ಠ ಅರ್ಹತಾ ಸೇವೆಗಳನ್ನು ಸಚಿವಾಲಯವು ಉಲ್ಲೇಖಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ರಕ್ಷಣಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಉದ್ಯೋಗದಲ್ಲಿ ಬಡ್ತಿಯೊಂದಿಗೆ ಸಂಬಳ ಕೂಡ ಏರಿಕೆ ಕಾಣಲಿದೆ.
ಕೇಂದ್ರ ರಕ್ಷಣಾ ಸಚಿವಾಲಯದ ಅಧಿಕೃತ ಹೇಳಿಕೆ ವಿವರ:
ಸರ್ಕಾರಿ ನೌಕರರ ಬಡ್ತಿಯ ತಕ್ಷಣದ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಇದನ್ನು ರಕ್ಷಣಾ ಸಚಿವಾಲಯ ಅಥವಾ ರಕ್ಷಣಾ ಇಲಾಖೆ ವೆಬ್ಸೈಟ್ನಲ್ಲಿ ಉದ್ಯೋಗಿಗಳ ಕಾರ್ನರ್ > 7ನೇ ಕೇಂದ್ರ ವೇತನ ಆಯೋಗ ಲಿಂಕ್ ಅಡಿಯಲ್ಲಿ ಅಪ್ಲೋಡ್ ಮಾಡುಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಕೇಂದ್ರ ಸರ್ಕಾರಿ ನೌಕರರ ಡಿ.ಎ ಮತ್ತು ಡಿ.ಆರ್ ಹೆಚ್ಚಳದ ಕುರಿತು ಕೇಂದ್ರದಿಂದ ಪ್ರಕಟಣೆಗಾಗಿ ಕಾಯುತ್ತಿರುವ ಸಮಯದಲ್ಲಿ ಈ ಬೆಳವಣಿಗೆಯಾಗಿದೆ.
ಈ ಬಾರಿ ಶೇಖಡ 3ರಷ್ಟು ಡಿಎ ಹೆಚ್ಚಳ ಸಾಧ್ಯತೆ, ಈ ಮಧ್ಯ ಕೇಂದ್ರವೂ ತನ್ನ ಒಂದು ಕೋಟಿಗೂ ಹೆಚ್ಚು ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಡಿಎಯನ್ನು 3 ರಿಂದ 45 ಪ್ರತಿ ಶತದಷ್ಟು ಹೆಚ್ಚಿಸಬಹುದು ಎಂದು ವರದಿಗಳು ಸೂಚಿಸಿವೆ. ಒಮ್ಮೆ ಜಾರಿಗೆ ಬಂದ ನಂತರ ಡಿಎ ಯ ಇತ್ತೀಚಿನ ಹೆಚ್ಚಳವು ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಈ ವಿಷಯದ ಬಗ್ಗೆ ಕೇಂದ್ರವು ಇನ್ನು ಯಾವುದೇ ಘೋಷಣೆ ಮಾಡದಿದ್ದರೂ ಅಖಿಲ ಭಾರತ ರೈಲ್ವೆಮೆನ್ ಫ್ರೆಡರೇಷನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರ ಅವರು ತುಟ್ಟಿಭತ್ಯೆಯಲ್ಲಿ 4 ಶೇಕಡ ಹೆಚ್ಚಳವನ್ನು ಕೋರುತ್ತಿದ್ದಾರೆ ಎಂದು ಹೇಳಿದರು.
ಜೂನ್ 2023 ಕ್ಕೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ AICPI ಸೂಚ್ಯಂಕವನ್ನು ಬಿಡುಗಡೆ ಮಾಡಿದ ನಂತರ ಡಿಎ ಹೆಚ್ಚಳದ ಸಾಧ್ಯತೆಯೂ ಹೆಚ್ಚಾಗಿದೆ. ಜೂನ್ 2023 ರ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ AICPI ಸೂಚ್ಯಂಕದ ಅಂಕಿ ಅಂಶಗಳನ್ನು ಕೇಂದ್ರವು ಬಿಡುಗಡೆ ಮಾಡದೆ ಮತ್ತು ಇದು ಸೂಚ್ಯಂಕದಲ್ಲಿ ದೊಡ್ಡ ಜಿಗಿತವನ್ನು ತೋರಿಸಿದೆ.
ಮೇ ತಿಂಗಳ ಸೂಚ್ಯಂಕ ಸಂಖ್ಯೆ 134.7 ಅಂಕಗಳಿಗೆ ಹೋಲಿಸಿದರೆ ಜೂನ್ ಸೂಂಚ್ಯಂಕವು 136.4 ಪಾಯಿಂಟ್ ಗಳಿಗೆ ಏರಿತ್ತು. ಜೂನ್ 2023 ರಲ್ಲಿ ಒಟ್ಟು 1.7 ಅಂಕಗಳು ಹೆಚ್ಚಳವನ್ನು ದಾಖಲಿಸಲಾಗಿದೆ. ಅಖಿಲ ಭಾರತ ಗ್ರಾಹಕರ ಬೆಲೆ ಸೂಚ್ಯಂಕ (AICPI) ಸಾಮಾನ್ಯವಾಗಿ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳದ ಶೇಕಡವಾರು ಪ್ರಮಾಣವನ್ನು ನಿರ್ಧರಿಸುತ್ತದೆ.
ಮಾರ್ಚ್ 2023 ರಲ್ಲಿ ಡಿಎ ಹೆಚ್ಚಳ ಬಗ್ಗೆ ಘೋಷಣೆ
ಕೇಂದ್ರ ಸರ್ಕಾರವು ಮಾರ್ಚ್ 2023 ರಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಮತ್ತು ಪಿಂಚಣಿದಾರರಿಗೆ ಜನವರಿ 1, 2023 ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯನ್ನು ಹೆಚ್ಚಿಸಿದೆ. ಬೆಲೆ ಏರಿಕೆಯ ವಿರುದ್ಧ ಸರಿದೂಗಿಸಲು ತುಟ್ಟಿಭತ್ಯೆಯು ಮೂಲವೇತನ/ ಪಿಂಚಣಿಯ ಶೇಕಡ 38 ರಷ್ಟು ಅಸ್ತಿತ್ವದಲ್ಲಿರುವ ದರದಿಂದ ಶೇಕಡ 4 ರಷ್ಟು ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ಸುಮಾರು 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆದಿದ್ದಾರೆ.
ಡಿಎ ಹೆಚ್ಚಳವನ್ನು ಯಾವಾಗ ಘೋಷಿಸಲಾಗುತ್ತದೆ..?
ಡಿಎ ಹೆಚ್ಚಳದ ನಿಖರವಾದ ದಿನಾಂಕವನ್ನು ಕೇಂದ್ರ ಸರ್ಕಾರವು ಇನ್ನೂ ಘೋಷಿಸದಿದ್ದರೂ ಹಣಕಾಸು ಸಚಿವಾಲಯದ ವೆಚ್ಚ ವಿಭಾಗವು ಅದರ ಆದಾಯದ ಪರಿಣಾಮದೊಂದಿಗೆ ಡಿಎ ಯನ್ನು ಹೆಚ್ಚಿಸುವ ಪ್ರಸ್ತಾಪವನ್ನು ರೂಪಿಸಿದ ನಂತರ ಕೇಂದ್ರ ಸಚಿವ ಸಂಪುಟವು ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದಾದ ಬಳಿಕ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಗುವುದು.
ಡಿಎ ಹೆಚ್ಚಳವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ..?
ಕೇಂದ್ರ ಸರ್ಕಾರ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ಹೊರ ತರುವ ಕೈಗಾರಿಕಾ ಕಾರ್ಮಿಕ ಇಚಿನ ಗ್ರಾಹಕ ಬೆಲೆ ಸೂಚ್ಯಂಕದಲ್ಲಿನ ಅಂಶಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಕೇಂದ್ರ ಸರ್ಕಾರವು ನೌಕರರು ಮತ್ತು ಪಿಂಚಣಿದಾರರಿಗೆ ಅವರ ಪ್ರಸ್ತುತ ಸಂಬಳದ ಮೇಲೆ ಏರುತ್ತಿರುವ ಬೆಲೆಗಳನ್ನು ಸರಿದೂಗಿಸಲು ತುಟ್ಟಿಭತ್ಯೆಯನ್ನು ನೀಡುತ್ತದೆ.
0 Please Share a Your Opinion.: