ನಾಡು ಮಾಹಿತಿ:-
ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳ ಆವರಣ ಹಾಗೂ ಸುತ್ತಮುತ್ತಲ ಸ್ಥಳಗಳಲ್ಲಿ ವಿದ್ಯಾರ್ಥಿಗಳ ಶ್ರಮದಾನದ ಮೂಲಕ ಗಿಡ ನೆಟ್ಟು ಪೋಷಿಸಲು ಆಯವ್ಯದಲ್ಲಿ ಘೋಷಿಸಿರುವ ‘ಸಸ್ಯ ಶ್ಯಾಮಲಾ ಯೋಜನೆಯನ್ನು ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆ ಮತ್ತು ಅರಣ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿವೆ.
ಅರಣ್ಯ ಇಲಾಖೆಯು ಪರಿಸರಕ್ಕೆ ಉಪಯುಕ್ತವಾಗುವ ಸಸಿಗಳನ್ನು ಉಚಿತವಾಗಿ ಒದಗಿಸಲಿದೆ. ಗಿಡವನ್ನು ನೆಟ್ಟು ಪೋಷಿಸುವ ಜವಾಬ್ದಾರಿ ಯನ್ನು ವಿದ್ಯಾರ್ಥಿಗಳು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಗ್ರಾಮಗಳ ಅರಣ್ಯ ಸಮಿ ತಿಗಳು ನಿರ್ವಹಿಸಬೇಕು. ಕನಿಷ್ಠ 5 ಮೀಟರ್ ಅಂತದಲ್ಲಿ ಪ್ರತಿ ಸಸಿಗಳನ್ನು ನೆಡ ಬೇಕು, ಕಟ್ಟಡ, ಆವರಣ ಗೋಡೆಗಳಿಂದ 5 ಮೀಟರ್ ದೂರ ಕಾಯ್ದುಕೊಳ್ಳಬೇಕು. ಬೇಸಿಗೆ ರಜೆಯ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸರದಿಯ ಮೇರೆಗೆ ಸಸಿಗಳಿಗೆ ನೀರುಣಿಸಬೇಕು ಎಂದು ಸೂಚಿಸಲಾಗಿದೆ
0 Please Share a Your Opinion.: