ನಾಡು ಮಾಹಿತಿ:-
ಈ ಬಾರಿಯೂ ಕೂಡ ಶಾಲೆಗಳಿಗೆ ದಸರಾ ರಜೆಯನ್ನು ಕಡಿತ ಮಾಡಲಾಗಿದೆ. ರಜೆ ಕಡಿತಕ್ಕೆ ರಾಜ್ಯಾದ್ಯಂತ ಆಕ್ರೋಶ ಮಾಡಲಾಗಿದ್ದು, ಶಾಲಾ ಶಿಕ್ಷಕರಿಗೆ ನಿರಂತರ ಕರ್ತವ್ಯ ಮಾಡುವಂತಾಗಿದೆ.
ರಾಜ್ಯದ ಶಾಲೆಗಳಿಗೆ ಈ ಬಾರಿಯೂ ಕೂಡ ದಸರಾ ರಜೆಯನ್ನು ಕಡಿತ ಮಾಡಲಾಗಿದೆ. ಹೌದು ರಾಜ್ಯ ಸರ್ಕಾರವು ರಾಜ್ಯದ ಶಾಲೆಗಳಿಗೆ ಈ ಬಾರಿಯೂ ದಸರಾ ರಜೆಯನ್ನು ಕಡಿತಗೊಳಿಸಲಾಗಿದ್ದು ಶಾಲಾ ಶಿಕ್ಷಕರಿಂದ ತೀವ್ರ ಆಕ್ಷೇಪ ವ್ಯಕ್ತ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಅಕ್ಟೋಬರ್ 2 ರಿಂದ ಅಕ್ಟೋಬರ್ 29 ರವರೆಗೆ ದಸರಾ ರಜೆಯನ್ನು ನೀಡಲಾಗುತ್ತಿತ್ತು. ಆದರೆ ಕೊರೋನ ಹಿನ್ನಲೆಯಲ್ಲಿ ಈ ಹಿಂದೆ ರಜೆಯನ್ನು ಕಡಿತುಗೊಳಿಸಲಾಗಿತ್ತು.
ಇನ್ನೂ ರಾಜ್ಯದಲ್ಲಿ ಲಾಕ್ ಡೌನ್ ನಲ್ಲಿ ನಡೆಯದ ತರಗತಿಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿತ್ತು. ಈಗ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದ್ದರೂ ಸರ್ಕಾರ ಹಿಂದಿನ ಅದೇ ಕಡಿತದ ನೀತಿ ಅನುಸರಿಸುತ್ತಿದೆ. ಸಾಮಾನ್ಯ ಶಾಲೆಗಳಿಗೆ ಅಕ್ಟೋಬರ್ 8 ರಿಂದ 24ಕ್ಕೆ ಸೀಮಿತಗೊಂಡಿದ್ದು ವಿಶೇಷ ಶಾಲಾ ಮಕ್ಕಳಿಗೆ ದಸರಾ ರಜೆಯನ್ನು ರದ್ದುಗೊಳಿಸಿದೆ. ಈ ಮೂಲಕ ಇಲಾಖೆಯ ವಿವಿಧ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಶಿಕ್ಷಕರಿಗೆ ನಿರಂತರ ಕರ್ತವ್ಯ ಮಾಡುವಂತಹಾಗಿದೆ.
ಇನ್ನು ಸದ್ಯ ಯಾವುದೇ ರೀತಿಯ ಸಮಸ್ಯೆ ಇರದಿದ್ದರೂ ಕೂಡ ಮತ್ತೆ ಶಾಲೆಗಳಿಗೆ ರಜೆಯನ್ನು ಕಡಿತಗೊಳಿಸಿ ಶಾಲಾ ಶಿಕ್ಷಕರು ನಿರಂತರಾಗಿ ಕರ್ತವ್ಯವನ್ನು ಮಾಡುವಂತಾಗಿದ್ದು ರಾಜ್ಯದ ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಇತ್ತ ಈ ಒಂದು ವಿಚಾರ ಕುರಿತು ರಾಜ್ಯದ ಶಿಕ್ಷಕರ ಸಂಘಟನೆ ನಾಯಕರು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.
Its really painful to kids and teachers and lecturers. Midterm break is essential to revive and refresh for all. Education minister can only solve this.
ReplyDelete