ರಾಜ್ಯದ ಜನತೆ ಗಮನಕ್ಕೆ: ಇಂದು ಗೃಹಜ್ಯೋತಿ ನೋಂದಣಿಗೆ ಕೊನೇ ದಿನ


ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು ಗೃಹಜ್ಯೋತಿ ಯೋಜನೆಯ ಕೂಡ. ಈ ಯೋಜನೆಯ ಅಡಿಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ನೋಂದಾಯಿಸಿಕೊಳ್ಳಲು ಇಂದು ಕೊನೆಯ ದಿನವಾಗಿದೆ.

ಇಂದು ನೋಂದಾಯಿಸಿಕೊಂಡವರಿಗೆ ಮಾತ್ರವೇ ಆಗಸ್ಟ್ ತಿಂಗಳ ಬಿಲ್ ಮೊತ್ತ 00 ಬರಲಿದೆ.

ಗೃಹಜ್ಯೋತಿ ಯೋಜನೆಗೆ ನೋಂದಣಿ ಆರಂಭಗೊಂಡ ನಂತ್ರ, ರಾಜ್ಯದಲ್ಲಿ ಈವರೆಗೆ ಇರುವಂತ ಫಲಾನುಭವಿಗಳಲ್ಲಿ ಶೇ.60ರಷ್ಟು ಗ್ರಾಹಕರು ಮಾತ್ರವೇ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಶೇ.40ರಷ್ಟು ವಿದ್ಯುತ್ ಗ್ರಾಹಕರು ನೋಂದಣಿ ಮಾಡುವುದು ಬಾಕಿ ಉಳಿದಿದೆ ಎನ್ನಲಾಗುತ್ತಿದೆ.


ವಿದ್ಯುತ್ ಸರಬರಾಜು ಕಂಪನಿ ನೀಡಿರುವ ಮಾಹಿತಿ ಪ್ರಕಾರ 1.92 ಕೋಟಿ ಗೃಹ ಬಳಕೆದಾರರಿದ್ದು, ಇವರಲ್ಲಿ ಶೇ.90ಕ್ಕೂ ಅಧಿಕ ಜನರು ಮಾಸಿಕ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿದ್ದಾರಂತೆ. ಇವರಲ್ಲಿ 1.18 ರಿಂದ 1.20 ಕೋಟಿ ಮಂದಿ ಮಾತ್ರವೇ ನೋಂದಣಿ ಮಾಡಿಕೊಂಡಿದ್ದು, ಉಳಿದವರು ಇನ್ನೂ ನೋಂದಣಿ ಮಾಡಿಕೊಳ್ಳಬೇಕಿದೆ.

ಇಂದೇ ನೋಂದಣಿಗೆ ಕೊನೆಯ ದಿನ

ಅಂದಹಾಗೇ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಮೊದಲ ತಿಂಗಳಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ಜುಲೈ.25 ಇಂದೇ ನೋಂದಣಿಗೆ ಕೊನೆಯ ದಿನವಾಗಿದೆ.

ಇಂದು ಯಾರೆಲ್ಲಾ ಗೃಹ ಜ್ಯೋತಿಗೆ ನೋಂದಣಿ ಮಾಡಿಕೊಳ್ಳಲಿದ್ದಾರೋ ಅವರಿಗೆಲ್ಲ ಆಗಸ್ಟ್ ತಿಂಗಳಿನಲ್ಲಿ ಶೂನ್ಯ ವಿದ್ಯುತ್ ಬಿಲ್ ಬರಲಿದೆ. ಒಂದು ವೇಳೆ ನೋಂದಾಯಿಸಿಕೊಳ್ಳದಿದ್ದರೇ ಆಗಸ್ಟ್ ನಂತ್ರದ ತಿಂಗಳಿನ ಬಿಲ್ ಶೂನ್ಯ ಬರಲಿದೆ.

ಗೃಹಜ್ಯೋತಿ ಯೋಜನೆಗೆ ಅಂತಿಮ ಗಡುವು ನಿಗದಿ ಪಡಿಸಿಲ್ಲ. ಸೆಪ್ಟೆಂಬರ್ ನಲ್ಲಿ ಇದರ ಲಾಭ ಪಡಿಯಲು ಅವಕಾಶ ಇದೆ. ಆದ್ರೇ ಆಗಸ್ಟ್ ತಿಂಗಳಿನಲ್ಲಿ ಉಚಿತ 200 ಯೂನಿಟ್ ವಿದ್ಯುತ್ ಪ್ರಯೋಜನ ಪಡೆಯಲು ಇಂದು ನೋಂದಣಿ ಮಾಡಿಸಬೇಕಿದೆ.

Post a Comment (0)
Previous Post Next Post

Responsive Ads

Responsive Ads