ಪತ್ನಿ ಮತ್ತು ಅಳಿಯನನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪೊಲೀಸ್ ಅಧಿಕಾರಿ

 


ಮಹಾರಾಷ್ಟ್ರ: ಸಹಾಯಕ ಪೊಲೀಸ್ ಆಯುಕ್ತ ಭರತ್ ಗಾಯಕ್ವಾಡ್ (ACP) ತನ್ನ ಪತ್ನಿ ಮತ್ತು ಅಳಿಯನನ್ನು ಬಂದೂಕಿನಿಂದ ಗುಂಡಿಕ್ಕಿ ಕೊಂದು ನಂತರ ಅವರು ಕೂಡ  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆ ನಗರದಲ್ಲಿ ಸೋಮವಾರ ನಡೆದಿದೆ.

ಬನೇರ್ ಪ್ರದೇಶದ ACP ಭರತ್ ಗಾಯಕ್ವಾಡ್ ಅವರ ಬಂಗಲೆಯಲ್ಲಿ ಮುಂಜಾನೆ 3.30 ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯ ಹಿಂದಿನ ಕಾರಣ ಬಹಿರಂಗವಾಗಿಲ್ಲ ಎಂದು ಚತುರ್ಶೃಂಗಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

'ಗಾಯಕ್ವಾಡ್ ಅಮರಾವತಿಯಲ್ಲಿ ACO ಯಾಗಿ ನೇಮಕಗೊಂಡಿದ್ದರು. ಸೋಮವಾರ ಮುಂಜಾನೆ 3.30 ರ ಸುಮಾರಿಗೆ, ACP ಮೊದಲು ತನ್ನ ಹೆಂಡತಿಯ ತಲೆಗೆ ಗುಂಡು ಹಾರಿಸಿದ್ದಾರೆ. ಗುಂಡಿನ ಶಬ್ದ ಕೇಳಿ ಅವರ ಮಗ ಮತ್ತು ಸೋದರಳಿಯ ಓಡಿ ಬಂದು ಬಾಗಿಲು ತೆರೆದರು. ಅವರು ಬಾಗಿಲು ತೆರೆದ ಕ್ಷಣ, ACP ತನ್ನ ಸೋದರಳಿಯನ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಗಾಯಕ್ವಾಡ್ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ' ಎಂದು ಚತುರ್ಶೃಂಗಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಮೃತರನ್ನು ಪೊಲೀಸ್ ಅಧಿಕಾರಿಯ ಪತ್ನಿ ಮೋನಿ ಗಾಯಕ್ವಾಡ್ (44 ವರ್ಷ) ಮತ್ತು ಸೋದರಳಿಯ ದೀಪಕ್ (35 ವರ್ಷ ) ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post a Comment (0)
Previous Post Next Post

Responsive Ads

Responsive Ads