ಕಂದಾಯ ಇಲಾಖೆಯ ಕೆಲಸಗಳಿಗೆ ಶೀಘ್ರವೇ 1,700 `ಗ್ರಾಮಕರಣಿಕರ' ನೇಮಕಾತಿ



ಬೆಂಗಳೂರು:

ರಾಜ್ಯದಲ್ಲಿ ಕಂದಾಯ ಇಲಾಖೆಯ ಕೆಲಸ ಕಾರ್ಯಗಳಿಗೆ ಶೀಘ್ರವೇ 1,700 ಗ್ರಾಮಕರಣಿಕರ ನೇಮಕ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂದಾಯ ಇಲಾಖೆಯ ಕೆಲಸಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಆರು ತಿಂಗಳೊಳಗೆ 1,700 ರಷ್ಟು ಗ್ರಾಮಕರಣಿಕರನ್ನು ನೇಮಕ ಮಾಡಲಾಗುವುದು.


ಗ್ರಾಮಕರಣಿಕರ ನೇಮಕ ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ಮೂಲಕ ನಡೆಯಲಿದೆ ಎಂದು ತಿಳಿಸಿದ್ದಾರೆ.


ಇನ್ನು ಮೂರ್ನಾಲ್ಕು ತಿಂಗಳೊಳಗೆ 250 ಲೈಸನ್ಸ್ಡ್ ಸರ್ವೆಯರ್ ಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Post a Comment (0)
Previous Post Next Post

Responsive Ads

Responsive Ads