ನಾಡು ಮಾಹಿತಿ:
ರಾಜ್ಯ ಸರ್ಕಾರದ 4 ನೇ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ. ನೀಡುವ ಯೋಜನೆಗೆ ನೆನ್ನೆ ಮೈಸೂರಿನಲ್ಲಿ ಅಧಿಕೃತ ಚಾಲನೆ ಸಿಕ್ಕಿದೆ. ಇನ್ನು ನೆನ್ನೆಯಿಂದಲೇ ರಾಜ್ಯದ ಮಹಿಳೆಯರ ಖಾತೆಗೆ 2000 ರೂ. ಹಣ ಜಮೆ ಆಗುತ್ತಿದೆ.
ರಾಜ್ಯದಲ್ಲಿ ಕೆಲವು ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ 2000 ರೂ. ಬಂದಿರುವ ಮೆಸೇಜ್ (SMS) ಬಂದಿದೆ ಇದರಿಂದ ರಾಜ್ಯದ ಮಹಿಳೆಯರು ಖುಷಿಯಾಗಿದ್ದಾರೆ.
ರಾಜ್ಯದಲ್ಲಿ ಕೋಟ್ಯಾಂತರ ಮಹಿಳೆಯರ ಖಾತೆಗೆ ಹಣ ವರ್ಗಾವಣೆಯಾಗುತ್ತಿರುವ ಕಾರಣ ನಿಮ್ಮ ಖಾತೆಗೆ ಹಣ ಬರುವುದಕ್ಕೆ 1 ರಿಂದ 2 ದಿನಗಳ ಕಾಲ ಸಮಯವನ್ನು ತೆಗೆದುಕೊಳ್ಳಬಹುದು. ಇನ್ನೂ ಸಪ್ಟೆಂಬರ್ 5 ರೊಳಗೆ ರಾಜ್ಯದ ಎಲ್ಲಾ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2000 ರೂ. ವರ್ಗಾವಣೆಯಾಗಲಿದೆ ಎಂದು ಹೇಳುಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ನಿಮ್ಮ ಖಾತೆಗೆ ಜಮ ಆಗಿದ್ಯಾ.. ಅಥವಾ ಇಲ್ಲವಾ... ಎಂಬುವುದನ್ನು ಈ ರೀತಿಯಾಗಿ ತಿಳಿದುಕೊಳ್ಳಬಹುದು.
ಮೊದಲು ನಿಮ್ಮ ಮೊಬೈಲ್ ಮೂಲಕವೇ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಯಾವ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ ಎಂಬುದನ್ನು ಚೆಕ್ ಮಾಡಿ ತಿಳಿದುಕೊಳ್ಳಬಹುದು.
ಚೆಕ್ ಮಾಡುವ ವಿಧಾನಗಳನ್ನು ತಿಳಿಯೋಣ ಬನ್ನಿ
1). ನೀವು ನಿಮ್ಮ ಮೊಬೈಲ್ ನ ಪ್ಲೇ ಸ್ಟೋರ್ ಗೆ ಹೋಗಿ (Play Store) DBT Karnataka ಎನ್ನುವ ಕರ್ನಾಟಕ ಸರಕಾರದ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಈ ಲಿಂಕ್ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. https://play.google.com/store/apps/detailsid=com.dbt karnataka.
2). ನಿಮ್ಮ ಮೊಬೈಲ್ ನಲ್ಲಿ ಆಪ್ ಡೌನ್ಲೋಡ್ ಆದ ಬಳಿಕ ಮೊದಲು ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ OTP ಇನ್ನು ಪಡೆಯಬೇಕು. ನಂತರ OTP ಎನ್ನು ಹಾಕಿ ವೆರಿಫೈ ಮಾಡಬೇಕು. ಇದು ಆದ ನಂತರ ನಿಮಗೆ ಇಷ್ಟವಾದ ನಾಲ್ಕು ಅಂಕೆಯ ಪಾಸ್ವರ್ಡ್ (Password) ಸೆಟ್ ಮಾಡಬೇಕು.
3). ನಿಮ್ಮ ಮೊಬೈಲ್ ನಲ್ಲಿ ಈ ಹಂತ ಯಶಸ್ವಿಯಾದ ಬಳಿಕ ನೀವು ಯಶಸ್ವಿಯಾಗಿ DBT ಕರ್ನಾಟಕ ಆಪ್ ಅನ್ನು ಓಪನ್ ಮಾಡಿರುತ್ತೀರಿ. ನಿಮ್ಮ ಆಧಾರ್ ಕಾರ್ಡ್ ನ ಎಲ್ಲಾ ವಿವರಗಳು ಬರುತ್ತದೆ.
4). ನಂತರ ಅದರಲ್ಲಿ Payment ಎಂಬ ಆಪ್ಷನ್ (option) ಅನ್ನು ಕ್ಲಿಕ್ ಮಾಡಿದ್ರೆ ನಿಮಗೆ DBT ಮೂಲಕ ಸರ್ಕಾರದ ಯಾವೆಲ್ಲ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಿದೆ ಎಂಬುದರ ಪಟ್ಟಿ ಬರುತ್ತದೆ. ಅದರಲ್ಲಿ ಗುಹಾಲಕ್ಷ್ಮೀ ಯೋಜನೆಯ ಹಣ ವರ್ಗಾವಣೆ ಆಗಿದ್ದರೆ ಹಾಗೂ ಅದರ ಮಾಹಿತಿ ಕೂಡ ಬರುತ್ತದೆ. ಈ ರೀತಿ ಯಾಗಿ ನೀವು ಕೂಡ ಚೆಕ್ ಮಾಡಬಹುದು.
😊ಈ ಮಾಹಿತಿ ಇಷ್ಟವಾದರೆ ಶೇರ್ ಮಾಡಿ😊
0 Please Share a Your Opinion.: