ರಾಜ್ಯದಲ್ಲಿ ಈಗಾಗಲೇ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಮುಕ್ತಾಯವಾಗಿದ್ದು, ರಜೆಯನ್ನು ಸಹ ನೀಡಲಾಗಿದೆ. ಈ ನಡುವೆಯೇ ಪದವಿ ಕಾಲೇಜಿನ ರಜೆ ಕುರಿತು ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇದನ್ನು ಪ್ರಾಂಶುಪಾಲರು ಗಮನಿಲೇಬೇಕು.
ರಾಜ್ಯದಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿದು ರಜೆಯನ್ನು ಸಹ ಘೋಷಣೆ ಮಾಡಲಾಗಿದೆ. ಈ ನಡುವೆಯೇ ಶಿಕ್ಷಣ ಇಲಾಖೆ ರಜೆ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸರ್ಕಾರಿ, ಅನುದಾನಿತ ಪದವಿ ಕಾಲೇಜಿನಲ್ಲಿ ಶೈಕ್ಷಣಿಕ ಕಾರ್ಯಾಗಾರದ ಹೆಸರಿನಲ್ಲಿ ಪಡೆಯುತ್ತಿದ್ದ ಅನ್ಯ ಕಾರ್ಯ ನಿಮಿತ್ತದ ರಜೆಯನ್ನು ಒಂದು ಸೆಮಿಸ್ಟರ್‌ನಲ್ಲಿ ನಾಲ್ಕು ರಜೆಗೆ ಮಿತಿಗೊಳಿಸಿ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಈ ರಜೆಯನ್ನು ಮೊದಲು ಆಯಾ ಕಾಲೇಜಿನ ಪ್ರಾಂಶುಪಾಲರು ಮಂಜೂರು ಮಾಡುತ್ತಿದ್ದರು. ಆದರೆ, ಇದೀಗ ಬದಲಾವಣೆ ಮಾಡಲಾಗಿದ್ದು, ಹೊಸ ಆದೇಶದ ಪ್ರಕಾರ ಈ ಜವಾಬ್ದಾರಿಯನ್ನು ಪ್ರಾಂಶುಪಾಲರಿಂದ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ವರ್ಗಾವಣೆ ಮಾಡಲಾಗಿದೆ.
ಈ ಹಿಂದೆ ರಜೆ ತೆಗೆದುಕೊಳ್ಳಬೇಕು ಅಂದ್ರೆ ಯಾವುದೇ ನಿಯಮಗಳು ಇರಲಿಲ್ಲ. ಯಾವಾಗ ಬೇಕಾದರೂ ರಜೆ ತೆಗೆದುಕೊಳ್ಳಬಹುದಾಗಿತ್ತು. ಪ್ರಾಂಶುಪಾಲರ ಮಟ್ಟದಲ್ಲೇ ರಜೆ ನಿರ್ಧಾರ ಆಗುತ್ತಿತ್ತು. ಆದ್ದರಿಂದ ಹೆಚ್ಚು ರಜೆ ತೆಗೆದುಕೊಳ್ಳಲಾಗಿತ್ತು. ಇದರಿಂದ ತರಗತಿಗಳಿಗೆ ತುಂಬಾ ಸಮಸ್ಯೆ ಆಗುತ್ತಿತ್ತು. ಈ ಹಿನ್ನೆಲೆ ಹಳೆಯ ಪದ್ಧತಿಯನ್ನು ಬದಲಾಯಿಸಿ ಈ ನಿರ್ಧಾರವನ್ನು ಶಿಕ್ಷಣ ಇಲಾಖೆ ತೆಗೆದುಕೊಂಡಿದೆ.
ರಾಜ್ಯದಲ್ಲಿ ಮೊದಲು 1-9ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಗಳು ಬಳಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮುಕ್ತಾಯ ಆಗಿದ್ದು, ಬೇಸಿಗೆ ರಜೆಯನ್ನು ಸಹ ನೀಡಲಾಗಿದೆ. ಬೇಸಿಗೆ ರಜೆಗೂ ಮುನ್ನ ವಿವಿಧ ಕಾರಣಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಈ ವರ್ಷದ ಆರಂಭದಿಂದಲೂ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಪ್ರತಿಭಟನೆ, ವಿಶೇಷ ಕಾರ್ಯಕ್ರಮಗಳ ವೇಳೆ ರಜೆ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವೇ ಸಿಕ್ಕಂತಾಗಿದೆ.