SSLC Result 2025: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪಾಸ್‌ ಆಗಲು ಇಷ್ಟು ಅಂಕ ಬಂದರೆ ಸಾಕು: ಗ್ರೇಸ್ ಮಾರ್ಕ್ಸ್‌ ಅಪ್ಡೇಟ್ಸ್‌!



SSLC Result 2025: ಎಸ್‌ಎಸ್‌ಎಲ್‌ಸಿ ಪಾಸಿಂಗ್ ಮಾರ್ಕ್ಸ್‌ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಭರ್ಜರಿ ಗುಡ್‌ನ್ಯೂಸ್‌ ನೀಡಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷೆ 1ರ ಫಲಿತಾಂಶವು ಮೇ ಮೊದಲ ವಾರದಲ್ಲಿ ಬರಲಿದೆ ಎಂದು ರಾಜ್ಯ ಸರ್ಕಾರವು ಹೇಳಿದೆ. ಈ ರೀತಿ ಇರುವಾಗಲೇ ವಿದ್ಯಾರ್ಥಿಗಳಿಗೆ ಬಂಪರ್ ಗುಡ್‌ನ್ಯೂಸ್‌ವೊಂದನ್ನು ನೀಡಲಾಗಿದೆ. ಪಾಸಿಂಗ್ ಮಾರ್ಕ್ಸ್‌ ಹಾಗೂ ಗ್ರೇಸ್ ಮಾರ್ಕ್ಸ್‌ಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ತಂದಿರುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ. ಇದೀಗ 20 ಗ್ರೇಸ್‌ ಮಾರ್ಕ್ಸ್‌ಗಳನ್ನು 10ಕ್ಕೆ ಇಳಿಕೆ ಮಾಡಲಾಗಿದೆಯಾದರೂ, ಪಾಸಿಂಗ್ ಮಾರ್ಕ್ಸ್‌ 35ಕ್ಕೆ ನಿಗದಿ ಮಾಡಲಾಗಿದೆ. ಮಕ್ಕಳಿಗೆ ಯಾವ ವಿಷಯದಲ್ಲಿ ಪಾಸಿಂಗ್ ಮಾರ್ಕ್ಸ್‌ ಸಿಗಲಿದೆ ಎನ್ನುವ ಬಂಪರ್ ಗುಡ್‌ನ್ಯೂಸ್‌ ಇಲ್ಲಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ಕೋವಿಡ್ ಪೂರ್ವದಲ್ಲಿದ್ದ ಮಾದರಿಯ ಅಂಕವನ್ನೇ ಇದೀಗ ನಿಗದಿ ಮಾಡಿದೆ. ಈ ಮೂಲಕ ಕಳೆದ ಬಾರಿಯಂತೆ 20 ಗ್ರೇಸ್‌ ಮಾರ್ಕ್ಸ್‌ ಸಿಕ್ಕು ಎಲ್ಲಾ ವಿಷಯಗಳಲ್ಲೂ ಪಾಸ್‌ ಆಗುವುದಕ್ಕೆ ವಿದ್ಯಾರ್ಥಿಗಳಿಗೆ ತುಸು ಕಷ್ಟವಾಗಬಹುದು. ಆದರೆ, ಪಾಸಿಂಗ್‌ಗೆ 35 ಅಂಕಗಳನ್ನು ನಿಗದಿ ಮಾಡಲಾಗಿದ್ದು. ಇದಕ್ಕೆ ಕನಿಷ್ಠ ಗ್ರೇಸ್‌ ಮಾರ್ಕ್ಸ್‌ಗಳನ್ನು ಈ ಹಿಂದಿನಂತೆಯೇ ಮುಂದುವರಿಸುವುದಾಗಿ ಸರ್ಕಾರವು ಹೇಳಿದೆ. ಅದೇನು ಎನ್ನುವ ವಿವರ ನೋಡೋಣ.

ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ- 1ಕ್ಕೆ 8,96,447 ವಿದ್ಯಾರ್ಥಿಗಳು ಹಾಜರಾಗಿದ್ದರೆ, 15,881 ಶಾಲೆಗಳ ವಿದ್ಯಾರ್ಥಿಗಳು ಕರ್ನಾಟಕದ 2,818 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಈ ಬಾರಿ ಬರೆದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಬಹು ಮುಖ್ಯಘಟ್ಟ ಅಂತಲೇ ಹೇಳಲಾಗುತ್ತದೆ. ಕಳೆದ ಬಾರಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್‌ ಗುಡ್‌ನ್ಯೂಸ್‌ ಇತ್ತು. ಆದರೆ ಈ ಬಾರಿ ಅದು ಇಲ್ಲ. ಶಿಕ್ಷಣ ಇಲಾಖೆಯು ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಶೇ 10ರಷ್ಟು ಗ್ರೇಸ್ ಮಾರ್ಕ್ಸ್‌ ಕೊಟ್ಟಿತ್ತು. ಇದರಿಂದ ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಸಹ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಾಯವಾಗಿತ್ತು. ಆದರೆ ಈ ಬಾರಿ ಕಳೆದ ಬಾರಿಯಂತೆ ಗ್ರೇಸ್‌ ಮಾರ್ಕ್ಸ್‌ ಇಲ್ಲ. ಪಾಸಿಂಗ್‌ ಮಾರ್ಕ್ಸ್‌ 35 ನಿಗದಿ ಮಾಡಲಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಸುಧಾರಣೆಗೆ ಪರಿಚಯಿಸಲಾಗಿದ್ದ ಶೇ.10ರಷ್ಟು ಹೆಚ್ಚುವರಿ ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿಯನ್ನು ಈ ವರ್ಷದಿಂದ ತೆಗೆಯಲಾಗಿದೆ. 2024ಕ್ಕೂ ಹಿಂದೆ ಇದ್ದಂತೆಯೇ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಕನಿಷ್ಠ ಅಂಕವನ್ನು ಶೇ 35ಕ್ಕೆ ನಿಗದಿ ಮಾಡಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.

ಎಸ್‌ಎಲ್‌ಎಲ್‌ಸಿ ವಿದ್ಯಾರ್ಥಿಗಳ ಪಾಸಿಂಗ್ ಮಾರ್ಕ್ಸ್‌ ಎಷ್ಟು: ವಿದ್ಯಾರ್ಥಿಗಳಿಗೆ ಶೇ 10ರಷ್ಟು ಎಲ್ಲಾ ವಿಷಯಗಳಿಗೂ ಗ್ರೇಸ್ ಮಾರ್ಕ್ಸ್‌ ಇರಲ್ಲ ಆದರೆ, ಕೆಲವೇ ಮಾರ್ಕ್ಸ್‌ಗಳಿಂದ ಫೇಲ್‌ ಆಗುವ ಸಾಧ್ಯತೆ ಇರುವ ಮಕ್ಕಳಿಗೆ ಈ ಬಾರಿಯೂ ಗುಡ್‌ನ್ಯೂಸ್‌ ಇರಲಿದೆ. ಎಂದಿನಂತೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಗರಿಷ್ಠ ಮೂರು ವಿಷಯಗಳಲ್ಲಿ ಶೇ.10ರಷ್ಟು ಗ್ರೇಸ್ ಮಾರ್ಕ್ಸ್‌ ನೀಡುವ ಪದ್ಧತಿ ಮುಂದುವರಿಯಲಿದೆ. ಇದರಿಂದ ಕಳೆದ ಬಾರಿ ಒಟ್ಟಾರೆ ಶೇ.20ರಷ್ಟು ಗ್ರೇಸ್ ಅಂಕ ನೀಡುವ ಬದಲಿಗೆ, ಈ ಬಾರಿ ಶೇ.10ಕ್ಕೆ ಸೀಮಿತವಾಗಲಿದೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಪ್ರಥಮ ಭಾಷೆಯಲ್ಲಿ 35 ಅಂಕಗಳನ್ನು ಪಡೆಯಬೇಕು. ಇನ್ನುಳಿದ ವಿಷಯಗಳಲ್ಲಿ ವಿದ್ಯಾರ್ಥಿಯು ಲಿಖಿತ ಪರೀಕ್ಷೆಯಲ್ಲಿ 28 ಅಂಕ ಬರಬೇಕು. ಆಂತರಿಕ ಅಂಕಗಳೊಂದಿಗೆ ವಿದ್ಯಾರ್ಥಿಯು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು 35 ಅಂಕ ಬಂದರೆ ಸಾಕು ಅಂತ ಹೇಳಲಾಗಿದೆ. ವಿದ್ಯಾರ್ಥಿಯು ಮೂರು ವಿಷಯಗಳಲ್ಲಿ ಅನುತ್ತೀರ್ಣರಾದರೆ, 10 ಗ್ರೇಸ್ ಅಂಕಗಳು ಸಿಗಲಿವೆ. ಈ ಮೂಲಕ ಅವನು/ಅವಳು ಉತ್ತೀರ್ಣನಾಗಲು ಕನಿಷ್ಠ ಅಂಕಗಳನ್ನು (219) ದಾಟಿದರೆ, ಗ್ರೇಸ್ ಅಂಕಗಳು ಸಿಗಲಿವೆ ಎಂದು ಹೇಳಲಾಗಿದೆ.

إرسال تعليق (0)
أحدث أقدم

Responsive Ads

Responsive Ads